iPadನಲ್ಲಿನ ಸಂಗೀತ ಆ್ಯಪ್‌ನಲ್ಲಿ ಸೌಂಡ್ ಗುಣಮಟ್ಟವನ್ನು ಸರಿಹೊಂದಿಸುವುದು

ಸಂಗೀತ ಆ್ಯಪ್‌ನಲ್ಲಿ ಸಂಗೀತ ಕೇಳಿಸುವ ಪರಿಯನ್ನು EQ ಮತ್ತು ಸೌಂಡ್ ಚೆಕ್ ಮೂಲಕ ಬದಲಾಯಿಸಿ.

ಎಚ್ಚರಿಕೆ: ಶ್ರವಣಶಕ್ತಿಯ ನಷ್ಟವನ್ನು ತಡೆಗಟ್ಟುವ ಪ್ರಮುಖ ಮಾಹಿತಿಗಾಗಿ, ಪ್ರಮುಖ ಸುರಕ್ಷತಾ ಮಾಹಿತಿ ಎಂಬುದನ್ನು ನೋಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಂಗೀತ ಎಂಬುದನ್ನು ಟ್ಯಾಪ್ ಮಾಡಿ.

  3. ಕೆಳಗಿನವುಗಳಲ್ಲಿ ಒಂದನ್ನು ಟ್ಯಾಪ್ ಮಾಡಿ:

    • EQ: ಇಕ್ವಲೈಜೇಷನ್ (EQ) ಸೆಟ್ಟಿಂಗ್ ಅನ್ನು ಆಯ್ಕೆಮಾಡಿ.

    • ಸೌಂಡ್ ಚೆಕ್: ನಿಮ್ಮ ಆಡಿಯೊದ ವಾಲ್ಯೂಮ್ ಮಟ್ಟವನ್ನು ಸಾಮಾನ್ಯಗೊಳಿಸಿ.