ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ
Apple ಸೇವೆಗಳಾದ App Store, Apple Music, iCloud, FaceTime, Apple Books ಮತ್ತು ಹೆಚ್ಚಿನದನ್ನು ಆ್ಯಕ್ಸೆಸ್ ಮಾಡಲು ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ.
iPhone ಅಥವಾ iPad ನಲ್ಲಿ: ಸೆಟ್ಟಿಂಗ್
ಆ್ಯಪ್‌ಗೆ ಹೋಗಿ, ನಂತರ Apple ಖಾತೆಯನ್ನು ಟ್ಯಾಪ್ ಮಾಡಿ.
Macನಲ್ಲಿ: Apple ಮೆನು
> ಸಿಸ್ಟಂ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ, ನಂತರ ಸೈಡ್‌ಬಾರಲ್ಲಿ “ನಿಮ್ಮ Apple ಖಾತೆಯೊಂದಿಗೆ ಸೈನ್ ಇನ್ ಮಾಡಿ” ಎಂಬುದನ್ನು ಕ್ಲಿಕ್ ಮಾಡಿ.
ನೀವು Apple ಖಾತೆಯನ್ನು ಹೊಂದಿರದಿದ್ದರೆ, ನೀವು ಒಂದು ಖಾತೆಯನ್ನು ರಚಿಸಬಹುದು.
ನಿಮ್ಮ ಹೆಸರು, ಫೋಟೋ, ಸಂಪರ್ಕ ಮಾಹಿತಿ, ಪಾಸ್‌ವರ್ಡ್, ಭದ್ರತಾ ಸೆಟ್ಟಿಂಗ್‌ಗಳು ಹಾಗೂ ಪಾವತಿ ಮತ್ತು ಶಿಪ್ಪಿಂಗ್ ಮಾಹಿತಿ ಸೇರಿದಂತೆ ನಿಮ್ಮ Apple ಖಾತೆಯ ಮಾಹಿತಿಯನ್ನು ನೀವು ವೀಕ್ಷಿಸಬಹುದು ಮತ್ತು ಬದಲಾಯಿಸಬಹುದು.
ನಿಮ್ಮ Apple ಖಾತೆಗೆ ಸೈನ್ ಇನ್ ಆಗಿರುವ ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಮಾಹಿತಿ ಮತ್ತು ಕಂಟೆಂಟ್ ಲಭ್ಯವಿರುತ್ತದೆ. ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.