iPadನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ

ನಿಮ್ಮ iPad ಸ್ಕ್ರೀನ್‌ನ ಮೇಲೆ ಕಾಣಿಸುವ ಚಿತ್ರವನ್ನು ತೆಗೆದುಕೊಳ್ಳಿ, ಇದರಿಂದ ನೀವು ಅದನ್ನು ನಂತರದ ಸಮಯದಲ್ಲಿ ವೀಕ್ಷಿಸಬಹುದು, ಇತರರೊಂದಿಗೆ ಹಂಚಿಕೊಳ್ಳಬಹುದು ಅಥವಾ ಅದನ್ನು ಡಾಕ್ಯುಮಂಟ್‌ಗಳಿಗೆ ಅಟ್ಯಾಚ್‌ ಮಾಡಬಹುದು.

ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ

  1. ಟಾಪ್ ಬಟನ್ ಮತ್ತು ಎರಡರಲ್ಲಿ ಒಂದು ವಾಲ್ಯೂಮ್ ಬಟನ್ ಅನ್ನು ಒಂದೇ ಸಮಯದಲ್ಲಿ ತ್ವರಿತವಾಗಿ ಒತ್ತಿ ಮತ್ತು ಬಿಟ್ಟುಬಿಡಿ.

    ಸ್ಕ್ರೀನ್‌ಶಾಟ್‌ನ ಥಂಬ್‌ನೇಲ್ ನಿಮ್ಮ ಸ್ಕ್ರೀನ್‌ನ ಕೆಳಗಿನ ಎಡ ಮೂಲೆಯಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಳ್ಳುತ್ತದೆ.

  2. ಸ್ಕ್ರೀನ್‌ಶಾಟ್ ಅನ್ನು ನೋಡಲು ಥಂಬ್‌ನೇಲ್ ಅನ್ನು ಟ್ಯಾಪ್ ಮಾಡಿ ಅಥವಾ ಅದನ್ನು ವಜಾಗೊಳಿಸಲು ಎಡಕ್ಕೆ ಸ್ವೈಪ್ ಮಾಡಿ.

    ಎರಡು iPad ಮಾಡಲ್‌ಗಳು. ಎರಡೂ iPad ಮಾಡಲ್‌ಗಳಲ್ಲಿ ಮೇಲ್ಭಾಗದ ಬಟನ್ ಇದೆ; ಒಂದು iPad ಮಾಡಲ್‌ನ ಬದಿಯಲ್ಲಿ ವಾಲ್ಯೂಮ್ ಬಟನ್‌ಗಳಿವೆ ಮತ್ತು ಇನ್ನೊಂದರ ಮೇಲ್ಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಆ್ಯರೋಗಳು ಮೇಲ್ಭಾಗದ ಬಟನ್‌ಗಳು ಮತ್ತು ವಾಲ್ಯೂಮ್ ಬಟನ್‌ಗಳನ್ನು ತೋರಿಸುತ್ತವೆ.

ಸ್ಕ್ರೀನ್‌ಶಾಟ್‌ಗಳನ್ನು ಫೋಟೋಸ್ ಆ್ಯಪ್‌ನಲ್ಲಿನ ನಿಮ್ಮ ಫೋಟೋ ಲೈಬ್ರರಿಯಲ್ಲಿ ಸ್ವಯಂಚಾಲಿತವಾಗಿ ಸೇವ್ ಮಾಡಲಾಗುತ್ತದೆ. ನಿಮ್ಮ ಎಲ್ಲಾ ಸ್ಕ್ರೀನ್‌ಶಾಟ್‌ಗಳನ್ನು ಒಂದೇ ಸ್ಥಳದಲ್ಲಿ ನೋಡಲು, ಫೋಟೋಸ್ ಆ್ಯಪ್ ಅನ್ನು ತೆರೆಯಿರಿ, ನಂತರ ಫೋಟೋಸ್ ಆ್ಯಪ್‌ನ ಸೈಡ್‌ಬಾರ್‌ನಲ್ಲಿ ಮೀಡಿಯಾ ಪ್ರಕಾರಗಳ ಕೆಳಗಿರುವ ಸ್ಕ್ರೀನ್‌ಶಾಟ್‌ಗಳನ್ನು ಟ್ಯಾಪ್ ಮಾಡಿ.

ಹೋಮ್ ಬಟನ್ ಹೊಂದಿರುವ iPadನೊಂದಿಗೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ

  1. ಟಾಪ್ ಬಟನ್ ಮತ್ತು ಹೋಮ್ ಬಟನ್ ಅನ್ನು ಒಂದೇ ಸಮಯದಲ್ಲಿ ತ್ವರಿತವಾಗಿ ಒತ್ತಿ ಮತ್ತು ಬಿಟ್ಟುಬಿಡಿ.

    ಸ್ಕ್ರೀನ್‌ಶಾಟ್‌ನ ಥಂಬ್‌ನೇಲ್ ನಿಮ್ಮ ಸ್ಕ್ರೀನ್‌ನ ಕೆಳಗಿನ ಎಡ ಮೂಲೆಯಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಳ್ಳುತ್ತದೆ.

  2. ಸ್ಕ್ರೀನ್‌ಶಾಟ್ ಅನ್ನು ನೋಡಲು ಥಂಬ್‌ನೇಲ್ ಅನ್ನು ಟ್ಯಾಪ್ ಮಾಡಿ ಅಥವಾ ಅದನ್ನು ವಜಾಗೊಳಿಸಲು ಎಡಕ್ಕೆ ಸ್ವೈಪ್ ಮಾಡಿ.

    ಹೋಮ್ ಬಟನ್ ಹೊಂದಿರುವ iPad. ಹೋಮ್ ಬಟನ್ ಮತ್ತು ಮೇಲ್ಭಾಗದ ಬಟನ್‌ಗೆ ಪಾಯಿಂಟ್ ಮಾಡುವ ಆ್ಯರೋಗಳು.

ಸ್ಕ್ರೀನ್‌ಶಾಟ್‌ಗಳನ್ನು ಫೋಟೋಸ್ ಆ್ಯಪ್‌ನಲ್ಲಿನ ನಿಮ್ಮ ಫೋಟೋ ಲೈಬ್ರರಿಯಲ್ಲಿ ಸ್ವಯಂಚಾಲಿತವಾಗಿ ಸೇವ್ ಮಾಡಲಾಗುತ್ತದೆ. ನಿಮ್ಮ ಎಲ್ಲಾ ಸ್ಕ್ರೀನ್‌ಶಾಟ್‌ಗಳನ್ನು ಒಂದೇ ಸ್ಥಳದಲ್ಲಿ ನೋಡಲು, ಫೋಟೋಸ್ ಆ್ಯಪ್ ಅನ್ನು ತೆರೆಯಿರಿ, ನಂತರ ಫೋಟೋಸ್ ಆ್ಯಪ್‌ನ ಸೈಡ್‌ಬಾರ್‌ನಲ್ಲಿ ಮೀಡಿಯಾ ಪ್ರಕಾರಗಳ ಕೆಳಗಿರುವ ಸ್ಕ್ರೀನ್‌ಶಾಟ್‌ಗಳನ್ನು ಟ್ಯಾಪ್ ಮಾಡಿ.

ಪೂರ್ಣ ಪುಟದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳುವುದು

Safariಯಲ್ಲಿನ ಸಂಪೂರ್ಣ ವೆಬ್‌ಪುಟದಂತಹ ನಿಮ್ಮ iPad ಸ್ಕ್ರೀನ್‌ಗಿಂತ ಹೆಚ್ಚು ಉದ್ದವಿರುವ ಕಂಟೆಂಟ್‌ನ ಸ್ಕ್ರೀನ್‌ಶಾಟ್ ಅನ್ನು ನೀವು ತೆಗೆದುಕೊಳ್ಳಬಹುದು.

  1. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • Face IDಯನ್ನು ಹೊಂದಿರುವ iPadನಲ್ಲಿ: ಟಾಪ್ ಬಟನ್ ಮತ್ತು ಎರಡರಲ್ಲಿ ಒಂದು ವಾಲ್ಯೂಮ್ ಬಟನ್ ಅನ್ನು ಒಂದೇ ಸಮಯದಲ್ಲಿ ತ್ವರಿತವಾಗಿ ಒತ್ತಿ ಮತ್ತು ಬಿಟ್ಟುಬಿಡಿ.

    • ಹೋಮ್ ಬಟನ್ ಹೊಂದಿರುವ iPadನಲ್ಲಿ: ಟಾಪ್ ಬಟನ್ ಮತ್ತು ಹೋಮ್ ಬಟನ್ ಅನ್ನು ಏಕಕಾಲದಲ್ಲಿ ತ್ವರಿತವಾಗಿ ಒತ್ತಿ ಮತ್ತು ಬಿಟ್ಟುಬಿಡಿ.

  2. ಸ್ಕ್ರೀನ್‌ನ ಕೆಳಗಿನ ಎಡ ಮೂಲೆಯಲ್ಲಿರುವ ಸ್ಕ್ರೀನ್‌ಶಾಟ್ ಥಂಬ್‌ನೇಲ್ ಅನ್ನು ಟ್ಯಾಪ್ ಮಾಡಿ.

  3. ಪೂರ್ಣ ಪುಟ ಎಂಬುದನ್ನು ಟ್ಯಾಪ್ ಮಾಡಿ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಮ್ಮ ಫೋಟೋಗಳ ಲೈಬ್ರರಿಯಲ್ಲಿ ಸ್ಕ್ರೀನ್‌ಶಾಟ್ ಅನ್ನು ಸೇವ್ ಮಾಡಲು ಫೋಟೋಸ್ ಆ್ಯಪ್‌ನಲ್ಲಿ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • PDF ಅನ್ನು ಫೈಲ್ಸ್ ಆ್ಯಪ್‌ನಲ್ಲಿ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಸ್ಥಳವನ್ನು ಆಯ್ಕೆಮಾಡಿ, ನಂತರ ಫೈಲ್ಸ್ ಆ್ಯಪ್‌ನಲ್ಲಿ ಸ್ಕ್ರೀನ್‌ಶಾಟ್ ಅನ್ನು ಸೇವ್ ಮಾಡಲು ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.