ಒಂದು ಸಂದೇಶದಲ್ಲಿ 'ಹಿಂದಿನ ಖರೀದಿಯಲ್ಲಿ ಬಿಲ್ಲಿಂಗ್ ಸಮಸ್ಯೆ ಉಂಟಾಗಿದೆ' ಅಥವಾ 'ದೃಢೀಕರಣದ ಅಗತ್ಯವಿದೆ' ಎಂದಿದ್ದರೆ
ಈ ಸಂದೇಶಗಳು ಗೋಚರಿಸಿದರೆ, ನೀವು ಪಾವತಿಸದಿರುವ ಬ್ಯಾಲೆನ್ಸ್ ಅನ್ನು ಹೊಂದಿದ್ದೀರಿ ಎಂದರ್ಥ. ನಿಮ್ಮ ಪಾವತಿ ವಿಧಾನವನ್ನು ಬದಲಾಯಿಸಿ ಅಥವಾ ಗಿಫ್ಟ್ ಕಾರ್ಡ್ ಅನ್ನು ರಿಡೀಮ್ ಮಾಡಿ ಮತ್ತು ಯಾವುದೇ ಪಾವತಿಸದಿರುವ ಆರ್ಡರ್‌ಗಳಿಗಾಗಿ ಹಣ ಪಾವತಿಸಲು ಬ್ಯಾಲೆನ್ಸ್ ಅನ್ನು ಬಳಸಿ.
ನೀವು ಪಾವತಿಸದಿರುವ ಬ್ಯಾಲೆನ್ಸ್ ಅನ್ನು ಹೊಂದಿದ್ದರೆ
'ಹಿಂದಿನ ಖರೀದಿಯಲ್ಲಿ ಬಿಲ್ಲಿಂಗ್ ಸಮಸ್ಯೆ ಉಂಟಾಗಿದೆ' ಅಥವಾ 'ದೃಢೀಕರಣದ ಅಗತ್ಯವಿದೆ' ಎಂದಿರುವ ಸಂದೇಶವನ್ನು ನೀವು ನೋಡಿದರೆ, ಈ ಹಿಂದಿನ ಖರೀದಿಗಾಗಿ ನಿಮ್ಮ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲು Apple ಗೆ ಸಾಧ್ಯವಾಗದಿರುವ ಕಾರಣ, ನೀವು ಪಾವತಿಸದಿರುವ ಬ್ಯಾಲೆನ್ಸ್ ಅನ್ನು ಹೊಂದಿದ್ದೀರಿ ಎಂದರ್ಥ. ನಿಮ್ಮ ಬ್ಯಾಲೆನ್ಸ್ ಅನ್ನು ಪಾವತಿಸುವವರೆಗೆ, ನಿಮಗೆ ಈ ಕೆಳಗಿನವುಗಳನ್ನು ಮಾಡಲು ಸಾಧ್ಯವಾಗದಿರಬಹುದು:
ಹೊಸ ಖರೀದಿಗಳನ್ನು ಮಾಡುವುದು
ಉಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು
ಸಬ್‌ಸ್ಕ್ರಿಪ್ಶನ್‌ಗಳನ್ನು ಬಳಸುವುದು
ಬಾಕಿ ಉಳಿದಿರುವ ಬ್ಯಾಲೆನ್ಸ್ ಅನ್ನು ಪಾವತಿಸಿದಾಗ, ನೀವು ಹೊಸ ಖರೀದಿಗಳನ್ನು ಮಾಡಬಹುದು ಅಥವಾ ಸಬ್‌ಸ್ಕ್ರಿಪ್ಶನ್‌ಗಳನ್ನು ಮತ್ತೊಮ್ಮೆ ಬಳಸಬಹುದು.
ಪಾವತಿಸದಿರುವ ಬ್ಯಾಲೆನ್ಸ್ ಅನ್ನು ಪಾವತಿಸುವುದು ಹೇಗೆ
ಹೊಸ, ಮಾನ್ಯವಾದ ಪಾವತಿ ವಿಧಾನವನ್ನು ಬಳಸಿಕೊಂಡು ಅಥವಾ Apple Gift Card ಅಥವಾ App Store ಮತ್ತು iTunes ಗಿಫ್ಟ್ ಕಾರ್ಡ್ ಅನ್ನು ಖರೀದಿಸಿ, ರಿಡೀಮ್ ಮಾಡುವ ಮೂಲಕ ನೀವು ಪಾವತಿಸದಿರುವ ಬ್ಯಾಲೆನ್ಸ್ ಅನ್ನು ಪಾವತಿಸಬಹುದು.
ನಿಮ್ಮ ಪಾವತಿ ವಿಧಾನವನ್ನು ಬದಲಾಯಿಸಿ
ಹಳೆಯ ಪಾವತಿ ವಿಧಾನವನ್ನು ತೆಗೆದುಹಾಕಿ.
ಹೊಸ ಪಾವತಿ ವಿಧಾನಕ್ಕೆ ಸ್ವಯಂಚಾಲಿತವಾಗಿ ಶುಲ್ಕ ವಿಧಿಸಲಾಗುತ್ತದೆ.
Apple Gift Card ಅಥವಾ App Store ಮತ್ತು iTunes ಗಿಫ್ಟ್ ಕಾರ್ಡ್ ಅನ್ನು ಬಳಸಿ
Apple Gift Card ಅಥವಾ App Store ಮತ್ತು iTunes ಗಿಫ್ಟ್ ಕಾರ್ಡ್ ಅನ್ನು ಖರೀದಿಸಿ.*
ನಿಮ್ಮ Apple ಖಾತೆಗೆ ಹಣವನ್ನು ಸೇರಿಸಲು ಗಿಫ್ಟ್ ಕಾರ್ಡ್ ಅನ್ನು ರಿಡೀಮ್ ಮಾಡಿ.
ನಿಮ್ಮ iPhone ಅಥವಾ iPad ನಲ್ಲಿ, ಸೆಟ್ಟಿಂಗ್ಸ್ ಆ್ಯಪ್ ಅನ್ನು ತೆರೆಯಿರಿ ಮತ್ತು ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ಮೀಡಿಯಾ ಮತ್ತು ಖರೀದಿಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಖಾತೆಯನ್ನು ವೀಕ್ಷಿಸಿ ಎಂಬುದನ್ನು ಟ್ಯಾಪ್ ಮಾಡಿ.
ಖರೀದಿಯ ಇತಿಹಾಸವನ್ನು ಟ್ಯಾಪ್ ಮಾಡಿ.
ನೀವು ಪಾವತಿಸಬೇಕಿರುವ ಮೊತ್ತ ಎಂಬ ಕೆಂಪು ಪಠ್ಯವನ್ನು ಹೊಂದಿರುವ ಆರ್ಡರ್ ಅನ್ನು ಟ್ಯಾಪ್ ಮಾಡಿ.
Appleಖಾತೆಕ್ರೆಡಿಟ್‌ನೊಂದಿಗೆ ಪಾವತಿಸಿ ಎಂಬುದನ್ನು ಟ್ಯಾಪ್ ಮಾಡಿ.
ಪಾವತಿಸದಿರುವ ಆರ್ಡರ್‌ಗಾಗಿ ನೀವು ಹಣ ಪಾವತಿಸಿದ ನಂತರ, ನಿಮ್ಮ ಉಳಿದಿರುವ Apple ಖಾತೆಯ ಬ್ಯಾಲೆನ್ಸ್‌ನೊಂದಿಗೆ ನೀವು ಖರೀದಿಗಳನ್ನು ಮಾಡಬಹುದು.
* ಗಿಫ್ಟ್ ಕಾರ್ಡ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ.
ನೀವು ಕುಟುಂಬ ಹಂಚಿಕೆಯನ್ನು ಬಳಸುತ್ತಿದ್ದರೆ
ನೀವು ಕುಟುಂಬ ಹಂಚಿಕೆಯನ್ನು ಬಳಸುತ್ತಿದ್ದರೆ ಮತ್ತು ಖರೀದಿ ಹಂಚಿಕೆಯು ಆನ್ ಆಗಿದ್ದರೆ, ಕುಟುಂಬದ ಎಲ್ಲಾ ಸದಸ್ಯರ ಖರೀದಿಗಳಿಗಾಗಿ ಕುಟುಂಬ ಆಯೋಜಕರ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲಾಗುತ್ತದೆ.
ನೀವು ಕುಟುಂಬ ಆಯೋಜಕರಾಗಿದ್ದರೆ
ನಿಮಗೆ ಅಥವಾ ಕುಟುಂಬದ ಸದಸ್ಯರೊಬ್ಬರಿಗೆ ಖರೀದಿಗಳನ್ನು ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಪಾವತಿ ವಿಧಾನವನ್ನು ಬದಲಾಯಿಸಿ.
ನೀವು ಕುಟುಂಬ ಆಯೋಜಕರಲ್ಲದಿದ್ದರೆ
ನಿಮಗೆ ಖರೀದಿಗಳನ್ನು ಮಾಡಲು ಸಾಧ್ಯವಾಗದಿದ್ದರೆ:
ಕುಟುಂಬ ಆಯೋಜಕರಿಗೆ ಅವರ ಪಾವತಿ ವಿಧಾನವನ್ನು ಬದಲಾಯಿಸಲು ತಿಳಿಸಿ.
ಅಥವಾ, ಗಿಫ್ಟ್ ಕಾರ್ಡ್ ಅನ್ನು ರಿಡೀಮ್ ಮಾಡಿ ಮತ್ತು ನಿಮ್ಮ ಪಾವತಿಸದಿರುವ ಆರ್ಡರ್ಗೆ ಹಣ ಪಾವತಿಸಿ.
ನಿಮಗೆ ಈಗಲೂ ಸಹಾಯ ಬೇಕಿದ್ದರೆ
ನಿಮ್ಮ ಪಾವತಿಸದಿರುವ ಬ್ಯಾಲೆನ್ಸ್ ಅನ್ನು ಬಗೆಹರಿಸಲು ನಿಮಗೆ ಈಗಲೂ ಸಾಧ್ಯವಾಗದಿದ್ದರೆ, Apple ಬೆಂಬಲವನ್ನು ಸಂಪರ್ಕಿಸಿ.