ನಿಮ್ಮ iPhone ಅಥವಾ iPad ನಲ್ಲಿ Wi-Fi ಗೆ ಕನೆಕ್ಟ್ ಮಾಡಿ
ಸಾರ್ವಜನಿಕ, ಸುರಕ್ಷಿತ ಮತ್ತು ಈ ಹಿಂದೆ ಕನೆಕ್ಟ್ ಮಾಡಿದ್ದ ನೆಟ್‌ವರ್ಕ್‌ಗಳು ಸೇರಿದಂತೆ, ನಿಮ್ಮ ಸಾಧನವನ್ನು ಲಭ್ಯವಿರುವ Wi-Fi ನೆಟ್‌ವರ್ಕ್‌ಗಳಿಗೆ ಕನೆಕ್ಟ್ ಮಾಡಿ.
Wi-Fi ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿ
ನಿಮ್ಮ ಹೋಮ್‌ಸ್ಕ್ರೀನ್‌ನಿಂದ, ಸೆಟ್ಟಿಂಗ್‌ಗಳು > Wi-Fi ಎಂಬಲ್ಲಿಗೆ ಹೋಗಿ.
Wi-Fi ಆನ್ ಮಾಡಲು ಟ್ಯಾಪ್ ಮಾಡಿ. ನಿಮ್ಮ ಸಾಧನವು ಲಭ್ಯವಿರುವ Wi-Fi ನೆಟ್‌ವರ್ಕ್‌ಗಳನ್ನು ಸ್ವಯಂಚಾಲಿತವಾಗಿ ಹುಡುಕುತ್ತದೆ.
ನೀವು ಸೇರಲು ಬಯಸುವ Wi-Fi ನೆಟ್‌ವರ್ಕ್‌ನ ಹೆಸರನ್ನು ಟ್ಯಾಪ್ ಮಾಡಿ. ಮೊದಲು ನೆಟ್‌ವರ್ಕ್‌ನ ಪಾಸ್‌ವರ್ಡ್ ಅನ್ನು ನಮೂದಿಸಲು ಅಥವಾ ನಿಯಮಗಳು ಮತ್ತು ನಿಬಂಧನೆಗಳಿಗೆ ಸಮ್ಮತಿಸಲು ನಿಮಗೆ ಹೇಳಬಹುದು. ನಿಮಗೆ Wi-Fi ನೆಟ್‌ವರ್ಕ್‌ನ ಪಾಸ್‌ವರ್ಡ್ ತಿಳಿದಿರದಿದ್ದರೆ, ನಿಮ್ಮ ನೆಟ್‌ವರ್ಕ್ ನಿರ್ವಾಹಕರನ್ನು ಸಂಪರ್ಕಿಸಿ.
ನೆಟ್‌ವರ್ಕ್‌ನ ಹೆಸರಿನ ಪಕ್ಕದಲ್ಲಿ ಇದೆಯೇ ಮತ್ತು ನಿಮ್ಮ ಸ್ಕ್ರೀನ್‌ನ ಮೇಲಿನ ಮೂಲೆಯಲ್ಲಿ ಇದೆಯೇ ಎಂಬುದನ್ನು ಹುಡುಕಿ. ಇದರರ್ಥ ನಿಮ್ಮನ್ನು ಯಶಸ್ವಿಯಾಗಿ ಕನೆಕ್ಟ್ ಮಾಡಲಾಗಿದೆ.

ಹೆಚ್ಚಿನ ಸಹಾಯ ಪಡೆಯಿರಿ
ಪ್ರಕಟಿತ ದಿನಾಂಕ: